ಶ್ರೀ ಸಿದ್ಧಾರೂಢಸ್ವಾಮಿಯವರ ಮಠದ ಪುಷ್ಕರಣಿಯಲ್ಲಿ ಆರೂಢ ಆರತಿ
Date : 18-03-2026
ದಿನಾಂಕ:-18.03.2026 ರಂದು ಸಂಜೆ 06-15 ಗಂಟೆಗೆ ಶ್ರೀ ಸಿದ್ಧಾರೂಢ ಸ್ವಾಮಿಯವರ ಮಠದ ಪುಷ್ಕರಣಿಯಲ್ಲಿ ನೆರವೇರಿತು. ಈ ಕಾರ್ಯಕ್ರಮದ ಸಾನಿಧ್ಯವನ್ನು ಪರಮ ಪೂಜ್ಯ ಶ್ರೀ ಅಭಿನವ ಸಿದ್ಧಾರೂಢ ಮಹಾಸ್ವಾಮಿಗಳು, ಶಾಂತಾಶ್ರಮ, ಹುಬ್ಬಳ್ಳಿ ಇವರು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಶ್ರೀ ವಿಜಯಕುಮಾರ ಶೆಟ್ಟರ ಉದ್ಯಮಿಗಳು ಹುಬ್ಬಳ್ಳಿ ಹಾಗೂ ಶ್ರೀ ರಮೇಶ ಬಾಫಣಾ, ಉದ್ಯಮಿಗಳು, ಹುಬ್ಬಳ್ಳಿ ಇವರುಗಳು ವಹಿಸಿದ್ದರು. ಅಧ್ಯಕ್ಷತೆಯನ್ನು ಟ್ರಸ್ಟ ಕಮೀಟಿಯ ಚೇರಮನ್ನರಾದ ಸಿ.ಎ. ಶ್ರೀ ಚನ್ನವೀರ ಮುಂಗುರವಾಡಿ ಇವರು ವಹಿಸಿದ್ದರು. ಕಾರ್ಯಕ್ರಮದ ನಿರೂಪಣೆಯನ್ನು ಟ್ರಸ್ಟ ಕಮೀಟಿಯ ಧರ್ಮದರ್ಶಿಗಳಾದ ಶ್ರಿ ಉದಯಕುಮಾರ ಡಿ. ನಾಯ್ಕ ಇವರು ನೆರವೇರಿಸಿದರು. ಕಾರ್ಯಕ್ರಮ ಸ್ವಾಗತ & ವಂದನಾರ್ಪಣೆಯನ್ನು ಧರ್ಮದರ್ಶಿಗಳಾದ ಶ್ರೀಮತಿ ಗೀತಾ ಕಲಬುರ್ಗಿ ಇವರು ನೆರವೇರಿಸಿದರು.
ಈ ಸಂದರ್ಭದಲ್ಲಿ ಟ್ರಸ್ಟ್ ಕಮೀಟಿಯ ಧರ್ಮದರ್ಶಿಗಳಾದ ಶ್ರೀ ಕೆ.ಎಲ್.ಪಾಟೀಲ, ಶ್ರೀ ಮಂಜುನಾಥ ಮುನವಳ್ಳಿ, ಶ್ರೀ ಬಾಳು ಟಿ. ಮಗಜಿಕೊಂಡಿ ಇವರುಗಳು ಉಪಸ್ಥಿತರಿದ್ದರು. ಭಕ್ತಾದಿಗಳು ಈ ಕಾರ್ಯಕ್ರಮದ ಪ್ರಯೋಜನವನ್ನು ಪಡೆದುಕೊಂಡರು